ಬೆಳ್ಳಿ ಕಾಲುಂಗುರ ಅಂತ ಹೇಳ್ತಿದ್ದಂಗೆ ಜ್ಞಾಪಕ ಬರೋದು ಸುನಿಲ್. ಈ ಚಿತ್ರ ಮತ್ತು ಈ ಚಿತ್ರದ ಗೀತೆಗಳು ಎಷ್ಟು ಹಿಟ್ ಆಗಿತ್ತಂದ್ರೆ ಈಗ್ಲೂ ಕೂಡ, ಬೆಳ್ಳಿ ಕಾಲುಂಗುರ ಚಿತ್ರದ ಹಾಡುಗಳನ್ನ ನೋಡುತ್ತೀವಿ, ಕೇಳ್ತೀವಿ, ಆನಂದಿಸುತ್ತೀವಿ. ಬನ್ನಿ ಈ ಚಿತ್ರದ ನಟ ಅಂದ್ರೆ ಸುನಿಲ್ ಅವರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಸುನಿಲ್ ಭಾರತೀಯ ಚಲನಚಿತ್ರೋದ್ಯಮದ ಪ್ರಸಿದ್ಧ ಮತ್ತು ಪ್ರತಿಭಾವಂತ ನಟರಲ್ಲಿ ಒಬ್ಬರು. ಮುಖ್ಯವಾಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದರು. ಅವರು ಏಪ್ರಿಲ್ 1, 1964 ರಂದು ಕರ್ನಾಟಕದ ಉಡುಪಿಯ ಎಡ್ತಾಡಿಯಲ್ಲಿ ಜನಿಸಿದರು. ಸುಮಾರು ನಾಲ್ಕರಿಂದ ಐದು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದರು. ಚೆನ್ನಾಗಿ ಮಿಂಚುತ್ತಿರುವ ಸಮಯ ಅದು, ಯಾಕೋ ದೇವರಿಗೂ ಇವ್ರು ಮಿಂಚೋದು ಇಷ್ಟವಿರಲಿಲ್ಲಿವೇನೋ ಜುಲೈ 24, 1994 ರಂದು ಕಾರು ಅಪಘಾತದಿಂದ ನಿಧನರಾದರು.
ಸುನಿಲ್, ಮಾಲಾಶ್ರೀ ಮತ್ತು ನಿರ್ಮಾಪಕ ಸಚಿನ್ ಮಲ್ಲಿ ಅವರೊಂದಿಗೆ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದ ಕಾರಣ, ಕಾರಿನಲ್ಲಿದ್ದ ಎಲ್ಲರಿಗೂ ಗಾಯಗಳಾಗಿದ್ದು ಕೂಡಲೇ ಸ್ಥಳೀಯರು ಎಲ್ಲರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಮಾಲಾಶ್ರೀ ಚೇತರಿಸುಕೊಳ್ಳುತ್ತಾರೆ, ಆದ್ರೆ ಸುನಿಲ್ ಅವರನ್ನ ಉಳಿಸಿಕೊಳ್ಳಾಗೋದಿಲ್ಲ.
ಅವರ ಜೀವಿತಾವಧಿಯಲ್ಲಿ, ಅವರು ಮೂವತ್ತಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಅವುಗಳಲ್ಲಿ ಕೆಲವು, ಬೆಳ್ಳಿ ಕಾಲುಂಗುರ, ಸಿಂದೂರ ತಿಲಕ, ಮಾಲಾಶ್ರೀ ಮಾಮಾಶ್ರೀ, ಶಶಿ, ಮನ ಮೆಚ್ಚಿದ ಸೊಸೆ, ನಗರದಲ್ಲಿ ನಾಯಕರು, ಮರಣ ಮೃದುಂಗ, ನಗು ನಗುತ ನಲಿ, ತವರು ಮನೆ ಉಡುಗೊರೆ, ಮಾಂಗಲ್ಯ, ಕಿಲಾಡಿ ಗಂಡು ಸಿಬಿಐ ಶಿವ, ಅಂತ ರಕ್ಷಕ , ಸ್ನೇಹದ ಕಡಲಲ್ಲಿ, ಶಾಂಭವಿ, ಒಬ್ಬರಿಗಿಂತ ಒಬ್ಬರು, ಕಲಿಯುಗದ ಸೀತೆ, ಮೆಚ್ಚಿದ ಮದುಮಗ, ದಾಕ್ಷಾಯಿಣಿ, ಸೆಪ್ಟೆಂಬರ್ 8, ಬಿಸಿರಕ್ತ ಮತ್ತು ಶ್ರುತಿ.
ಪುದುವಸಂತಂ ಎಂಬ ಹಿಟ್ ತಮಿಳು ಚಿತ್ರದ ರಿಮೇಕ್ ಆದ ಶ್ರುತಿ ಚಿತ್ರ ಸುನಿಲ್ ಅವರ ವೃತ್ತಿ ಜೀವನದ ಅತ್ಯಂತ ಯಶಸ್ವಿ ಚಿತ್ರ. ಈ ಚಿತ್ರದ ಮೂಲಕ ನಟ, ನಿರ್ಮಾಪಕ ಮತ್ತು ನಿರ್ದೇಶಕರಾದ ದ್ವಾರಕೀಶ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರಕಿತ್ತು. "ಅಭಿಲಾಶ್ ಎಂಟರ್ಪ್ರೈಸಸ್" ಎಂಬ ನಿರ್ಮಾಣ ಕಂಪನಿಯ ಬ್ಯಾನರ್ ಅಡಿಯಲ್ಲಿ 1990 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
Source: https://nettv4u.com/celebrity/kannada/movie-actor/sunil
0 ಕಾಮೆಂಟ್‌ಗಳು