Kala Movie

 

ನಾಯಕ ಮಾಂಸದಲ್ಲಿ ಮದ್ದಿನ ಗುಂಡು ಇಟ್ಟು ನಾಯಿನ ಸಾಯಿಸಿಬಿಡುತ್ತಾನೆ. ಆ ನಾಯಿನ ಒಬ್ಬ ಹಂದಿ ಬೇಟೆಯಾಡುವ, ಪ್ರೀತಿಯಿಂದ ಸಾಕಿರ್ತಾನೆ. ಈ ಸಿನಿಮಾದ ವಿಲ್ಲನ್ ಕೂಡ ಈತನೆ. ಪ್ರೀತಿಯ ನಾಯಿನ ಕೊಂದ ಅಂತ, ಈತ ನಾಯಕನನ್ನೇ ಕೊಲ್ಲಲು ಹೊರಟು ಬಿಡುತ್ತಾನೆ. ಅಬ್ಬ ಅಬ್ಬಾ ಆ ಒಂದ್ ಒಂದು ಹೊಡೆದಾಡಿಕೊಳ್ಳೋ ದೃಶ್ಯ ನೋಡ್ತಿದ್ರೆ. ಇವರ ಯಾರು ಗುರು ಇಂತ ಮೆಂಟಲ್ ಗಳು ಅನ್ನಿಸುತ್ತೆ. ಈ ಹೊಡೆದಾಟದಲ್ಲಿ ಕೊನೆಯ ಅರ್ಧ ಸಿನೆಮಾ ನಡಿಯುತ್ತೆ. ನಾಯಕ ಸರಿಯಾದ ಹೊಡೆತಗಳನ್ನ ತಿಂದು, ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಳ್ಳುತ್ತಾನೆ. ಆದ್ರೆ ಆಚೆ ಇದ್ದ ವಿಲ್ಲನ್ ಜೋರು ಮಾಡುತ್ತಿರುತ್ತಾನೆ. ಕೊನೆಗೆ ನಾಯಕ ಒಂದು ತೀರ್ಮಾನಕ್ಕೆ ಬರ್ತಾನೆ, ಸರಿ ನಾನು ನಿನ್ನ ಪ್ರೀತಿಯ ನಾಯಿಯನ್ನು ಕೊಂದಿದ್ದೀನಿ. ನೀನು ನಮ್ಮ blacky ನ ಕೊಲ್ಲಬೇಕು ತಾನೇ, ಹೋಗಿ ಕೊಲ್ಲು ಅಂತ ಹೇಳಿಬಿಡುತ್ತಾನೆ. ಆ ಮಾತನ್ನು ಕೇಳಿದ್ದೆ ತಡ, ಹೊಡಿ ಹೋಗಿ ನಾಯಿಯಿದ್ದ ಮನೆಯ ಬೀಗವನ್ನ ಹೊಡಿದು, ನಾಯಿಯ ಕಡೆ ನೋಡುತ್ತಾನೆ. ಆ ನಾಯಿಯ ಕಣ್ಣಿನಿಂದ ನೀರು ಸೋರುತ್ತೆ. ಅದನ್ನ ಗಮನಿಸಿದ ವಿಲ್ಲನ್, ಒಂದು ಬೀಡಿಯನ್ನು ಸೇದುತ್ತಾ, ಬಾಂಬ್ ಗೆ ಬೆಂಕಿ ಅಂಟಿಸಿ, ಬಾಗಿಲ ಬಳಿ ಎಸೆಯುತ್ತಾನೆ. ಬಾಂಬ್ ಸಿಡಿದ ರಭಸಕ್ಕೆ ಬಾಗಿಲು ಪುಡಿ ಪುಡಿಯಾಗುತ್ತೆ. ಮತ್ತೆ ನಗುತ್ತಾ ವಿಲ್ಲನ್ ಎಂಟ್ರಿಯಾಗುತ್ತಾನೆ. ಮತ್ತೆ ಹೊಡೆದಾಟ, ಮನೆಯಲ್ಲಿ ಇರುವ ವಸ್ತುಗಳು ಎಲ್ಲವೂ ಪುಡಿ ಪುಡಿ. ಈತ ನಾಯಕನನ್ನ ಹೊಡೆಯಬೇಕಾದರೆ, ನಾಯಕನ್ನ ಹಂದಿ ಎಂದು ಕೊಂಡೆ ಹೊಡೆಯುತಿರುತ್ತಾನೆ. ಈಗೆ ತುಂಬಾ ಪೆಟ್ಟು ತಿಂದ ನಾಯಕ, ಓಡಿ ಹೋಗಿ ಮಾಡಿ ಮೇಲೆ ಇರುವ ಕೊಠಡಿಯೊಂದರ ಬಾತ್ರೂಮಿನಲ್ಲಿ ಅವಿತು ಕುಳಿತುಕೊಳ್ಳುತ್ತಾನೆ. ಮತ್ತೆ ವಿಲ್ಲನ್ ನಾಯಕನ್ನ ಹುಡುಕಿಕೊಂಡು ಮೇಲೆ ಬರ್ತಾನೆ. ನಾಯಕನನ್ನ ನೋಡಿ, ಗುರಾಯಿಸುತ್ತ, ಜೇಬಿನಿಂದ ಬೀಡಿಯನ್ನು ತೆಗೆದು, ಸ್ಟೈಲ್ ಗಿ, ಹಚ್ಚಿಕೊಂಡು, ಹೊಗೆಬಿಡುತ್ತಾನೆ. ಹಾಗೆ ನಗುತ್ತ, ಅಷ್ಟೇನಾ ಆಗೋದು, ನಿನ್ನ ಕೈಲಿ ಅಂತ ಹೇಳಿ ಜೋರಾಗಿ ನಗುತ್ತಾನೆ. ನಾಯಕ ಮಾತಾಡದೆ ಸುಮ್ಮ್ನೆ ಒಂದು ಮೂಲೆಯಲ್ಲಿ ಕುಳಿತಿರುತ್ತಾನೆ. ಮತ್ತೆ ವಿಲ್ಲನ್ ಈಗ ಗೊತ್ತಾಯತ ನೋವು ಅಂದ್ರೆ ಏನು ಅಂತ. ಸರಿ ನಾನಿನ್ನು ಬರುತ್ತಿನಿ ಅಂತ ಹೇಳಿ, ಒಂದು ಬಕೆಟ್ ನೀರು ತಲೆ ಮೇಲೆ ಹಾಕಿಕೊಂಡು, ಶರ್ಟನ್ನು ಬದಲಾಯಿಸಿಕೊಂಡು, ಆ ಮನೆಯಿಂದ ನಗುತ್ತಾ ಜಾಗ ಖಾಲಿ ಮಾಡುತ್ತಾನೆ. ಹೋಗುತ್ತಾ ಗೇಟಿನ ಚಿಲುಕ ಹಾಕಿ, ನಗುತ್ತಾ blacky ನಾ ಕರೆದುಕೊಂಡು ಹೋಗುತ್ತಾನೆ. ನಾಯಕ ಮಾಡಿ ಮನೆಯ ಕಿಟುಕಿಯಿಂದ, ವಿಲ್ಲನ್ ಹೋಗುತ್ತಿರುವುದನ್ನೇ ನೋಡುತಿರುತ್ತಾನೆ. ಸಿನೆಮಾ ಮುಗಿಯುತ್ತೆ.
ನಿಜವಾದ ನಾಯಕ ಯಾರು ಈ ಸಿನೆಮಾಗೆ?
ನಾಯಿಯನ್ನ ಕೊಂದಿದಕ್ಕೆ, ಎಷ್ಟು ಕೋಪ ಈ ವಿಲ್ಲನ್ಗೆ, ಆದ್ರೆ ಆತ ಹಂದಿಯನ್ನು ಕೊಲ್ಲುವಾಗ ಯೋಚನೆ ಮಾಡುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ನಾಯಕ ಅಂತ ಯಾರು ಇಲ್ಲ ಈ ಸಿನಿಮಾದಲ್ಲಿ, ಆದ್ರೆ ವಿಲ್ಲನ್ ನಾ ಪಾತ್ರ ಮಾತ್ರ terror ಆಗಿ ತೋರಿಸಿದ್ದಾರೆ. ಅಷ್ಟೇ ಮುಂದೆ ಯಾವದಾದ್ರೂ, ಕತೆ ನೋಡಿದ್ರೆ ಹೇಳ್ತಿತಿನಿ. ಬೈ ಗುಡ್ ನೈಟ್.. ಮನಿಕೊಳ್ಳಿ.
🤣🤣

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು