Premam Pujyam

ನಿಜವಾದ ಪ್ರೀತಿಯನ್ನ ಅನುಭವಿಸದವರಷ್ಟೇ, ಈ ಸಿನಿಮಾದ ಕತೆಯನ್ನ ಅರ್ಥ ಮಾಡಿಕೊಳ್ಳಲು ಸಾಧ್ಯ.

ನಿರ್ದೇಶಕರ ಮೊದಲ ಸಿನೆಮಾವಾದ್ರೂ, ಹಾಗೇನೂ ತುಂಬಾ ಹೊಸಬರು ಅಂತ ಅನ್ನಿಸೋದಿಲ್ಲ.
ಇನ್ನಷ್ಟು ಒಳ್ಳೆ ಸಂಭಾಷಣೆ ಬೇಕು ಅನ್ನಿಸುತ್ತೆ, ಆದ್ರೆ ಇರುವ ಸಂಭಾಷಣೆ ಬೇಜಾರ್ ಅನ್ನಿಸೋಲ್ಲ. ಕಾಲೇಜು ಅಲ್ಲಿ ನಡೆವ ಕತೆಯಾಗಿರೋದ್ರಿಂದ ಸ್ವಲ್ಪ ಕಾಮಿಡಿ ಬೇಕು ಅನ್ನಿಸುತ್ತೆ. ಆದ್ರೂ ಎಲ್ಲಾ ಕತೆ ಒಂದೇ ತರ ಇರ್ಬೇಕು ಅಂತೇನು ಇಲ್ವಲ್ಲಾ. Screenplay ಎಲ್ಲವೂ ಅಚ್ಚು ಕಟ್ಟಾಗಿ, ತುಂಬಾ ಸುಂದರವಾಗಿ ಪ್ರತಿಯೊಂದು ಫ್ರೇಮ್ ನಾ ಅದ್ಭುತವಾಗಿ ಕ್ಯಾಮೆರಾದಲ್ಲಿ ಸೆರೆಮಾಡಿ, ನೋಡುಗರ ಕಣ್ಣುಗಳಿಗೆ ಮನರಂಜಿಸುವ ದೃಶ್ಯಗಳನಾ ಕಲ್ಪಿಸಿ ಕೊಟ್ಟ ಕ್ಯಾಮೆರಾ ಮ್ಯಾನ್ ನೂ ಮೆಚ್ಚಬೇಕು.


ಕತೆ ತುಂಬಾ ಸಿಂಪಲ್ ದೊಡ್ಡ ದೊಡ್ಡ ಡೈಲಾಗ್ ಗಳಿಲ್ಲ, ದೊಡ್ಡ ದೊಡ್ಡ fight ದೃಶ್ಯಗಳಿಲ್ಲ, ದೊಡ್ಡ ದೊಡ್ಡ ಅನ್ನೋದು ಯಾವ್ದು ಇಲ್ಲ ಆದ್ರೆ ಕತೆ ಮಾತ್ರ ಕೊನೆಗೆ ತುಂಬಾ ದೊಡ್ಡದು ಅನ್ನಿಸಿ ಬಿಡುತ್ತೆ. 

ಪ್ರೀತಿ ಮಾಡೋರು ಸಿಕ್ಕಿಲ್ಲ ಅಂದ್ರೆ, ಸಾಯೋರು ಇದ್ದಾರೆ, ಸಾಯ್ಸೋರು ಇದ್ದಾರೆ, ಇಂತವರ ಮದ್ಯೆ ಪ್ರೀತಿ ಎಂಬುದು ಇವತ್ತೇ ಸಾಯೋ ಅಂತದಲ್ಲ ಅದು divine ಅಂತ ತೋರಿಸೋ cinema.
 ನಿರ್ದೇಶಕ ಡಾಕ್ಟರ್ ಆಗಿರೋದ್ರಿಂದ, ಅವರ ಸಿನೆಮಾನಾ ತೆರೆ ಮೇಲೆ ತಂದಿದ್ದಾರೆ ಅನ್ನಿಸುತ್ತೆ.


ಒಟ್ಟಿನಲ್ಲಿ ಪ್ರೀತಿನಾ ಹುಚ್ಚನಂತೆ ಪ್ರೀತಿಸುವವನಿಗೆ ಅಷ್ಟೇ ಪ್ರೀತಿ ಎಂಬುದು ಹುಚ್ಚು ಅನ್ನಿಸೋದು. ಅಂತವರು ಈ ಸಿನೆಮಾನಾ ಮಿಸ್ ಮಾಡಿಕೊಳ್ಳಲೇ ಬಾರದು.

ಒಳ್ಳೆಯಾದಗಲಿ, ಒಳ್ಳೆಯಾ ಪ್ರಯತ್ನ ಎಂದಿಗೂ ಸೋಲಬಾರದು

ಪ್ರೇಮ್ lovely ಸ್ಟಾರ್ ಹೇಳೋದೇ ಬೇಕಾಗಿಲ್ಲ, ಅವ್ರು ನೋಡೋಕೆ ಎಷ್ಟು lovelyಯಾಗಿದ್ದರೋ, ಅಷ್ಟೇ lovely ಯಾಗಿ ನಟನೆ ಮಾಡಿದ್ದಾರೆ. ಇವರನ್ನ ಇಂತ ಚಿತ್ರಗಳಲ್ಲಿ ನೋಡೋದೆ ಒಂತರ ಆನಂದ.

Premam pujyam ನಾ ಚಿತ್ರಮಂದಿರಗಳಲ್ಲಿ ಹೋಗಿ ನೋಡಿ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು