ಬಡವ ರಾಸ್ಕಲ್ ಹೆಸರಷ್ಟೇ ಖಾರವಾಗಿರೋದು, ಆದ್ರೆ ಸಿನೆಮಾ ತುಂಬಾ ಸಿಹಿ.
ಅಬ್ಬ ಅಬ್ಬಾ ಏನ್ ಗುರು ಈ ಸಿನೆಮಾನಾ ನೋಡೊಕೆ ಎಲ್ಲೋದ್ರು, ಚಿತ್ರಮಂದಿರ ತುಂಬಿದೆ ಅನ್ನೋ ಫಲಕ ನೋಡಿ ಸಕ್ಕತ್ ಬೇಜಾರ್ ಆಗ್ತಿತ್ತು. ಯಾವ್ದು ಗುರು ಸಿನೆಮಾ ಇದು ಇಸ್ಟ್ ವರ್ಷ ಆದ್ಮೇಲೆ ಎಲ್ಲಾ ಕಡೆ ಟಿಕೆಟ್ ಸಿಕ್ತಿಲ್ಲಾ ಅಂತ ಬೇಜಾನ್ ಬೇಜಾರ್ ಆಗ್ತಿತ್ತು. ಆದ್ರೆ ಈ ಸಿನೆಮಾ ನಮ್ಮನ್ನ ಇಷ್ಟು ಸತ್ತಾಯಿಸಿ ಬಿಡ್ತಲ್ಲ ಅನ್ನೋ ಕೋಪಕ್ಕೆ, ಇವತ್ತು ಈ ಸಿನೆಮಾ ನೋಡ್ದೆ ಮನೆಗೆ ಹೊಗ್ಬಾರ್ದು ಅಂತ ನಾನ್ ನನ್ನ ಗೆಳೆಯ ನಿರ್ಧಾರಕ್ಕೆ ಬಂದ್ಬಿಟ್ವಿ, ಕೊನೆಗೆ 9:30ಕ್ಕೆ ಒಂದು ಷೋ ನಲ್ಲಿ ಟಿಕೆಟ್ ಸಿಕ್ತು, ಅದು ಹೌಸ್ ಫುಲ್. ಬಾರಿ ಖುಷಿ ಆಯ್ತು. ನಮ್ ಧನಂಜಯ ನಾ ಇಷ್ಟು ಜನ ಈ ಒತ್ತನಲ್ಲಿ ಬಂದು ನೋಡ್ತಾರೆ ಅಂದ್ರೆ ಗ್ರೇಟ್ ಅಲ್ವಾ. ಒಳ್ಳೆದಾಗ್ಲಿ ಇನ್ನು ಹೆಚ್ಚು ಸಿನೆಮಾಗಳು ಇದೆ ರೀತಿ ಹಿಟ್ ಆಗ್ಲಿ. ಒಟ್ಟನಲ್ಲಿ ಕನ್ನಡ ಸಿನೆಮಾಗಳು ಹೌಸ್ ಫುಲ್ ಆಗೋದು ನೋಡೋಕೆ ಒಂತರ ಮಜಾ, ಆ ಮಜಾ ತುಂಬಾ ದಿನಗಳ ನಂತರ ಬಡವ ರಾಸ್ಕಲ್ ಸಿನೆಮಾಯಿಂದ ಮತ್ತೆ ಶುರು ಆಯ್ತು. ಈಗ ಬಡವ ರಾಸ್ಕಲ್ ಸಿನೆಮಾ ವಿಷಯಕ್ಕೆ ಬರೋಣ.
ಡಾಲಿ ಬಗ್ಗೆ ಹೇಳೋದೇ ಬೇಡ, ನಟ ರಾಕ್ಷಸ ಅಂತ ಬಿರುದು ಆಗ್ಲೇ ಕೊಟ್ಟಬಿಟ್ಟಿದ್ದಾರೆ. ಮತ್ತೆ ಅವರ ನಟನೆ ಬಗ್ಗೆ ಹೇಳೋ ಅವಶ್ಯಕತೆ ಇಲ್ಲ, ಇದ್ರಲ್ಲೂ ಮಸ್ತಾಗಿ ನಟನೇ ನಾ ಬಿರಿಯಾನಿ ಸವಿಯೋ ಆಗೇ ಸವಿದಿದ್ದಾರೆ. ಕತೆ ಸಕ್ಕತ್ ಸಿಂಪಲ್, ಆದ್ರೆ ಸ್ಕ್ರೀನ್ ಪ್ಲೇ ಅದ್ಬುತ ಯಾಕೆ ಅಂದ್ರೆ ಪ್ರೇಕ್ಷಕರಿಗೆ ಕೊಂಚವೂ ಬೇಜಾರ್ ಆಗೋದಿಲ್ಲ. ನಿರ್ದೇಶಕ ಶಂಕರ್ ಗುರು ನಿರ್ದೇಶನ, ಸಾಹಿತ್ಯ, ಸಂಭಾಷಣೆ ಎಲ್ಲವೂ ಅದ್ದೂರಿಯಾಗಿದೇ.
ಒಟ್ಟನಲ್ಲಿ ಎಲ್ಲ ಗೆಳೆಯರು ಸೇರಿ ಒಂದ್ ಒಳ್ಳೆ ಸಿನೆಮಾ ಮಾಡಿ ಕರ್ನಾಟಕದ ಜನತೆಗೆ ಹಂಚಿದ್ದರೆ, ಎಲ್ಲರೂ ಒಳ್ಳೆ ಮನಸ್ಸಿನಿಂದ ಸಿನೆಮಾ ನೋಡಿ ಹರಿಸಿ ಹಾರೈಸುತ್ತಿದ್ದಾರೆ.
ಜೈ ಬಡವ ರಾಸ್ಕಲ್.
0 ಕಾಮೆಂಟ್‌ಗಳು